ಶಾಲಾ ಪ್ರಾರಂಭೋತ್ಸವ ವರದಿ
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸತ್ತೂರು ಶಾಲೆಯಲ್ಲಿ ಇಂದು ಅದ್ದೂರಿಯಾಗಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಶ್ರೀ ಈಶ್ವರ ಉಳ್ಳಾಗಡ್ಡಿ ಮಾನ್ಯ ಅಪರ ಆಯುಕ್ತರು ಧಾರವಾಡ ವಿಭಾಗ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
“ಸರಕಾರಿ ಶಾಲೆಗಳು ಗುಣಾತ್ಮಕ ಶಿಕ್ಷಣಕ್ಕೆ ಆಧ್ಯತೆ ನೀಡಿದ್ದು, ಮಕ್ಕಳಿಗೆ ಉಚಿತ ಸೌಲಭ್ಯಗಳನ್ನು
ನೀಡುವುದರ ಜೊತೆ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕೆಲಸ ಮಾಡುತ್ತಿವೆ. ಪಾಲಕರು ತಮ್ಮ ಮಕ್ಕಳನ್ನು ಸರಕಾರಿ
ಶಾಲೆಗಳಿಗೆ ದಾಖಲು ಮಾಡಲು ಕರೆ ನೀಡಿದರು. ಶ್ರೀ ಗಿರೀಶ್ ಪದಕಿ, ಉಪನಿರ್ದೇಶಕರು, ಆಯುಕ್ತರ ಕಚೇರಿ ಧಾರವಾಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಕ್ಕಳಿಗೆ ಶುಭ ಕೋರಿದರು. ಶ್ರೀಮತಿ ಸುಜಾತ ತಿಮ್ಮಾಪೂರ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಧಾರವಾಡ ಶಹರ ಅಧ್ಯಕ್ಷ ತೆ ವಹಿಸಿ ಧಾರವಾಡ ಶಹರ ವಲಯದ
ಶಾಲೆಗಳು ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನಿಡಿದ್ದು, ಎಲ್ಲ ಶಾಲೆಗಳ ಮೂಲಭೂತ ಸೌಕರ್ಯ ಸುಧಾರಣೆಗೆ
ಒತ್ತು ನೀಡಲಾಗಿದೆ. ಶಾಲೆಗಳ ಸುಧಾರಣೆಯಲ್ಲಿ ಎಸ್ ಡಿ ಎಂ ಸಿ ಪಾತ್ರ ತುಂಬಾ ಗುರುತರ ಪ್ರತಿ ಶಾಲೆಯಲ್ಲೂ ಶಿಕ್ಷಕರು ಹೆಚ್ಚು ಕ್ರೀಯಾಶೀಲವಾಗಿ
ತಮ್ಮನ್ನು ತೊಡಗಿಸಿಕೊಂಡು ಸರಕಾರಿ ಶಾಲೆಗಳಲ್ಲಿ ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಕರೆನೀಡಿದರು.
ಶ್ರೀ ಪ್ರವೀಣಕುಮಾರ ಗುಜ್ಜಾರ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ಧಾರವಾಡ ಶಹರ, ಶ್ರೀಮತಿ ರೇಣುಕಾ ಅಮಲಝರಿ APCO, ಶ್ರೀಮತಿ ರೇಖಾ ಭಜಂತ್ರಿ ಹಿರಿಯ ಉಪನ್ಯಾಸಕರು ಡಯಟ್, ಶ್ರೀಮತಿ ಹೇಮಲತಾ ಭಜಂತ್ರಿ ಉಪನ್ಯಾಸಕರೋ ಡಯಟ್, ಶ್ರೀ ಪುಟ್ಟಪ್ಪ ಭಜಂತ್ರಿ ಉಪನ್ಯಾಸ ಕರು, ಶ್ರೀ ರಮೇಶ ಕಾಂಬಳೆ ಮುಖ್ಯ ಶಿಕ್ಷಕರು, ಶ್ರೀ ಬಸವರಾಜ ಚಿಕ್ಕೂರ ಇಸಿಓ, ಶ್ರೀ ವಿಜಯಕುಮಾರ್ ಕರಿಕಟ್ಟಿ ಬಿ ಆರ್ ಪಿ ಪ್ರೌಢ, ಶ್ರೀಮತಿ ಎಸ್ ವಿ ಸೊಬರದ ಬಿ ಆರ್ ಪಿ, ಶ್ರೀಮತಿ ವಿಜಯಲಕ್ಷ್ಮಿ ಕಮ್ಮಾರ ಸಿಆರ್‌ಪಿ, ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು, ಶಾಲೆಯ ಎಲ್ಲ ಶಿಕ್ಷಕ ವೃಂದ, ಪೋಷಕರು, ಎಲ್ಲ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.