ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ನವಲೂರ್ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಲ್ಲಿ ಆಯೋಜಿಸಿದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ದಿನಾಂಕ 28.02. 2025
ಸಚೇತನ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿರುವ ವರದಿ ಶಾಲಾ ಪ್ರಾರ್ಥನಾ ಸಮಯದಲ್ಲಿ ಸಚೇತನಾ ಕ್ಯಾಲೆಂಡರ್ ಪ್ರಕಾರ ಪ್ರತಿ ದಿನ ಚಟುವಟಿಕೆಗಳನ್ನು ನಿರ್ವಹಿಸುವುದು
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಫೋಟೋ ವರದಿ
ನಮ್ಮ ಶೌಚಾಲಯ ನಮ್ಮ ಗೌರವ
ಹೆಣ್ಣುಮಕ್ಕಳ ಸುರಕ್ಷತೆ ಜಾಗೃತಿ ಕಾರ್ಯಕ್ರಮ
100 ದಿನಗಳ ಓದುವ ಅಭಿಯಾನದ ಕ್ಲಸ್ಟರ್ ಶಾಲೆಗಳ ಫೋಟೋ ವರದಿ
21 ದಿನಗಳ ಓದುವ ಅಭಿಯಾನ ಕಾರ್ಯಕ್ರಮದ ವರದಿ
Go green resulation Ghps Ashraya Colony
ಇಂದು ನಡೆದ ಜಿಲ್ಲಾ ಮಟ್ಟದ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ MPS ನವಲೂರ್ ಶಾಲೆಯ ಮಕ್ಕಳು ದ್ವಿತೀಯ ಸ್ಥಾನ ಗಳಿಸಿದ್ದು.. 5 ಬಾಲಕರು ರಾಜ್ಯ ಮಟ್ಟದ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಅಭಿನಂದನೆಗಳು 💐💐💐💐
ಗುಣಾತ್ಮಕ ಶೈಕ್ಷಣಿಕ ವರ್ಷ 2023-24(2023 - 24)
ಎ ಚ್.ಪಿ.ಎಸ್ ಸತ್ತೂರ ಶಾಲೆಯ ಬಾಲಕಿಯರು ತಾಲ್ಲೂಕು ಮಟ್ಟದ ಖೋ.ಖೋ ಪಂದ್ಯದಲ್ಲಿ ಜಯಗಳಿಸಿದ್ದಾರೆ.💐💐
ಕಬಡ್ಡಿಯಲ್ಲಿ ವಿಜಯ ಪತಾಕೆ ಹಾರಿಸಿದ ಇಟಿಗಟ್ಟಿ ಬಾಲಿಕೆಯರಿಗೆ ಹಾಗೂ ತರಬೇತು ಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸನದಿ ಸರ್ ಹಾಗೂ ಪ್ರೋತ್ಸಾಹಿಸಿದ ಎಲ್ಲ ಶಿಕ್ಷಕರಿಗೆ ಪ್ರಭಾರಿ ಪ್ರಧಾನ ಗುರು ಮಾತೆಯರಿಂದ ಅಭಿನಂದನೆಗಳು 💐💐👍👍🙏🙏
*ವಾಲಿಬಾಲ್ ವಿಜಯ ಪತಾಕೆ ಹಾರಿಸಿದ ಇಟಿಗಟ್ಟಿ ಪ್ರಾಥಮಿಕ ಶಾಲೆ* 2023 - 24
*ಮಾಳಮಡ್ಡಿ-ಧಾರವಾಡ: ದಿ:17-08-2023*
*ನಿರಂತರವಾಗಿ ಅತ್ಯುತ್ತಮ ಕ್ರೀಡಾ ಪ್ರದರ್ಶನ ನೀಡುತ್ತಾ ಬಂದಿರುವ ಇಟಿಗಟ್ಟಿ ಪ್ರಾಥಮಿಕ ಶಾಲೆ ಇಂದು ನಡೆದ ತಾಲೂಕಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜಯಿಯಾಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು*
*ದೈಹಿಕ ಶಿಕ್ಷಕರಾದ ಶ್ರೀ ವಿ ಜಿ ಸೇತಸನದಿ ಅವರ ಕಠಿಣ ತಾಲೀಮಿನಲ್ಲಿ ತರಬೇತಾದ ಪ್ರಾಥಮಿಕ ವಿಭಾಗದ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಕೌಶಲ್ಯಪೂರ್ಣ ಪ್ರದರ್ಶನ ನೀಡಿ ನೆರೆದ ಕ್ರೀಡಾಪ್ರೇಮಿಗಳ ಪ್ರಶಂಸೆಗೆ ಪಾತ್ರರಾದರು*
*ಮಕ್ಕಳ ಸಾಧನೆಗೆ ಹರ್ಷ ವ್ಯಕ್ತಪಡಿಸುತ್ತಾ ಪ್ರಧಾನ ಗುರುಮಾತೆಯವರು ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೆಯೇ ಗ್ರಾಮದ ಹಿರಿಯರು ದೈಹಿಕ ಶಿಕ್ಷಕರಾದ ಶ್ರೀ ವಿ ಜೀ ಸೇತಸನದಿ ಅವರನ್ನು ಅಭಿನಂದಿಸಿದ್ದಾರೆ.
3. ಇಂದು ದಿನಾಂಕ 10.06.2023 ರಂದು ನವಲೂರ ಕ್ಲಸ್ಟರ್ ಮಟ್ಟದ ಪ್ರಧಾನ ಗುರುಗಳ ಸಭೆಯನ್ನು CRC ನವಲೂರ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು. ಈ ಸಭೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಉಮೇಶ ಬೊಮ್ಮಕ್ಕನವರ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಮಂಜುನಾಥ ಅಡಿವೇರ ಹಾಗೂ BRP ಶ್ರೀ ವಿಜಯಕುಮಾರ ಕರಿಕಟ್ಟಿ ಅವರು ಭಾಗವಹಿಸಿದ್ದರು ಮತ್ತು ಗಿಡ ನೆಡುವ ಮೂಲಕ ಉದ್ಘಾಟನೆ ಮಾಡಲಾಯಿತು. ಹಾಗೂ ನವಲೂರ ಕ್ಲಸ್ಟರ್ ಮತ್ತು MPS ನವಲೂರ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು. ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ನವಲೂರ ಕ್ಲಸ್ಟರ್ ವಾರ್ಷಿಕ ವರದಿ 2022-23 ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ 2023-24 ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ತಿಳಿಸಿದರು. ಮತ್ತು EEDS ಕುರಿತು ಮಾಹಿತಿ ನೀಡಿದರು CRP ಗಾಯತ್ರಿ ಕಮ್ಮಾರ ಅವರು ಕ್ಲಸ್ಟರ್ ರೂಪರೇಷೆ ಕುರಿತು ಮಾಹಿತಿ ನೀಡುತ್ತಾ ನಿರೂಪಿಸಿದರು.
2. ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ 31.5.2023
1.ಇಂದು 30.5.2023 ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯಾಧಿಕಾರಿಗಳು ನವಲೂರು ಶಾಲಾ ಸಂಕೀರ್ಣದಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಹಾಗೂ ಪ್ರೌಢ ಸರ್ಕಾರಿ ಮಾದರಿ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ ಎಸ್ ಡಿ ಎಂ ಸಿ ಇವರೊಂದಿಗೆ ಚರ್ಚಿಸಿ ಶಾಲೆಯ ಹೇಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಹಾಗೂ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿದರು. ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ100% ಫಲಿತಾಂಶಕ್ಕಾಗಿ ಕೈಗೊಳ್ಳಬಹುದಾದಂತಹ ಕ್ರಿಯಾಯೋಜನೆಗಳ ಕುರಿತು ಚರ್ಚಿಸಿ ಮಾರ್ಗದರ್ಶನ ಮಾಡಿದರು.
24) ಇಂದು ದಿನಾಂಕ 3.5.2023 ಬೆಳಿಗ್ಗೆ 9:00 ಗಂಟೆಗೆ ಎಂ ಪಿ ಎಸ್ ನವಲೂರು, ಸರ್ಕಾರಿ ಪ್ರೌಢಶಾಲೆ ನವಲೂರು, ಸರ್ಕಾರಿ ಉರ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಹಯೋಗದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬೊಮ್ಮಕ್ಕ ನವರ್ ಸರ್, ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಎಲ್ಲ ಶೈಕ್ಷಣಿಕ ಮೇಲ್ವಿಚಾರಕರು ನಾಲ್ಕು ಶಾಲೆಗಳ ಪ್ರಧಾನ ಗುರುಗಳು ಹಾಗೂ ಸಹ ಶಿಕ್ಷಕರು ಮತ್ತು ಮಕ್ಕಳು ಊರಿನ ಪ್ರಮುಖ ಬೀದಿಗಳಲ್ಲಿ ಮತದಾನದ ಕುರಿತು ಪ್ರಭಾತ ಪೇರಿ ಮಾಡಿ ಮತದಾರರಿಗೆ ಪ್ರತಿಜ್ಞಾ ವಿಧಿ ಹೇಳಿಸಿ ಮತದಾನದ ಮಹತ್ವ ತಿಳಿಸಿದರು.
23) SAS ಪರೀಕ್ಷೆ 2023 GHS Navalur ( 17.1.2023)
22) ಇಂದು ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ದೀಪಕ್ ಕುಲಕರ್ಣಿ ಸರ್ ನವಲೂರ ಸಮೂಹ ಸಂಪನ್ಮೂಲ ಕೇಂದ್ರಕ್ಕೆ ಭೇಟಿ ನೀಡಿ crc ವಹಿಗಳನ್ನು ಪರಿಶೀಲಿಸಿ ಮಾರ್ಗದರ್ಶನ ಮಾಡಿದರು.
21) Mid Line survey Navalur cluster
ಇಂದು hps ತಡಸಿನಕೊಪ್ಪ ಮತ್ತು hps ಸತ್ತೂರ ಹಾಗೂ lps ಹರಿಜನಕೇರಿ ನವಲೂರ ಶಾಲೆಗಳಲ್ಲಿ ಕಲಿಕಾ ಚೇತರಿಕೆ mid line survey ಪರಿಶೀಲನೆ ಗಾಗಿ ಧಾರವಾಡ ಶಹರ ಮತ್ತು ಗ್ರಾಮೀಣ ವಲಯದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಯಟ್ ನ ಹಿರಿಯ ಉಪನ್ಯಾಸಕರು ಆಗಮಿಸಿ ಮಾರ್ಗದರ್ಶನ ಮಾಡಿದರು.
20) Oosc ಮಗು ಕರೆಪ್ಪ ಶಿವಪ್ಪ ತಿಪ್ಪಣ್ಣವರ ಶಾಲಾ ಮುಖ್ಯವಾಹಿನಿಗೆ ತರಲು ನನ್ನೊಂದಿಗೆ ಸತತವಾಗಿ ಶ್ರಮಿಸಿದ ಪ್ರಧಾನ ಗುರುಗಳಿಗೆ ಮತ್ತು ಬಮ್ಮನಪಾಡ ಗುರುಗಳಿಗೆ ಧನ್ಯವಾದಗಳು 🙏🙏🙏💐💐
19) ದಿನಾಂಕ 17.12.2022 ರಂದು ಶನಿವಾರ 6-8 ನೇ ತರಗತಿಯ ಶಿಕ್ಷಕರಿಗೆ ಕಲಿಕಾ ಚೇತರಿಕೆ ಸಮಾಲೋಚನಾ ಸಭೆ ನಡೆಸಲಾಯಿತು.
ಸಭೆಗೆ diet ನ ಹಿರಿಯ ಉಪನ್ಯಾಸಕರಾದ ಮಾನ್ಯ ನಂದನ ಸರ್ ಹಾಗೂ ಮಾನ್ಯ ಕಾಂಬೋಗಿ ಸರ್ ಆಗಮಿಸಿ ಎಲ್ಲ ಶಿಕ್ಷಕರಿಗೆ ಚಟುವಟಿಕೆಯುಕ್ತವಾಗಿ ಕಲಿಕಾಪ ಲಗಳನ್ನು ಆಯೋಜಿಸುವ ಕುರಿತು ಮಾರ್ಗದರ್ಶನ ಮಾಡಿದರು.
18) ದಿನಾಂಕ 9.12.2022 ರಂದು ಸತ್ತೂರನಲ್ಲಿ
ನೂತನವಾಗಿ ಸ್ಡಿಎಂಸಿ ಅನ್ನು ರಚಿಸಲಾಯಿತು
16) ಇಂದು ನಡೆದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ಗುಂಪು ವಿಭಾಗದಲ್ಲಿKLE ರಾಯಪುರ ಶಾಲೆಯ ಮಕ್ಕಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಹಾಗೂ ವೈಯಕ್ತಿಕ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ನವಲೂರಿನ ವಿದ್ಯಾರ್ಥಿ ಸಮಾಧಾನಕರ ಬಹುಮಾನ ಗಳಿಸಿದ್ದಾನೆ.
ತರಬೇತಿ ನೀಡಿದ ವಿಜ್ಞಾನ ಶಿಕ್ಷಕರಿಗೆ, ಪ್ರಧಾನ ಗುರುಗಳಿಗೆ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆಗಳು💐💐💐💐
15) ಕನಕದಾಸರ ಜಯಂತಿ ಮತ್ತು ಒನಕೆ ಓಬವ್ವ ಜಯಂತಿ ಮತ್ತು ರಾಷ್ಟ್ರೀಯ ಶಿಕ್ಷಣ ದಿನಾಚರಣೆ
14) 67 ನೇ ಕನ್ನಡ ರಾಜ್ಯೋತ್ಸವ gallery

12) 2022 ನೇ ಸಾಲಿನ ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ HPS ನವಲೂರ ಛಾವಣಿ ಶಾಲೆಯ ವಿದ್ಯಾರ್ಥಿ ಕಾರ್ತಿಕ ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ
11) ದಿನಾಂಕ 22.9.2022 ರಾಷ್ಟ್ರೀಯ ಜನಸಂಖ್ಯಾ ಯೋಜನೆಯ ಅಡಿಯಲ್ಲಿ ತಾಲೂಕು ಮಟ್ಟದ ಜಾನಪದ ನೃತ್ಯ ಹಾಗೂ ಪಾತ್ರಅಭಿನಯ ಸ್ಪರ್ಧೆಗಳು ಸರ್ಕಾರಿ ಪ್ರೌಢಶಾಲೆ ನವಲೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಸಮನ್ವಯ ಅಧಿಕಾರಿ m v adiver ಉದ್ಘಾಟಿಸಿದರು npep ನೋಡಲ್ ಡಯಟ್ ಉಪನ್ಯಾಸಕರಾದ ಡಾ :ಅಮಲಜೇರಿ ಪ್ರಸ್ತಾವಿಕವಾಗಿ ಮಾತನಾಡಿದರು..*
*ಜನಪದ ನೃತ್ಯದಲ್ಲಿ ಸರ್ಕಾರಿ ಪ್ರೌಢಶಾಲೆ ಇಟಿಗಟ್ಟಿ ಮಕ್ಕಳು ಪ್ರಥಮ ಸ್ಥಾನ ಹಾಗೂ ಪಾತ್ರ ಅಭಿನಯ ಸ್ಪರ್ಧೆಯಲ್ಲಿ ಪ್ರೌಢ ಶಾಲೆ ಗಾಂಧಿನಗರ ಮಕ್ಕಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು 💐💐💐 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಡಾ: ವಿಜಯಕುಮಾರ್ ವಹಿಸಿದ್ದರು ಕಾರ್ಯಕ್ರಮದಲ್ಲಿ ನೋಡಲ್ ಬಿ ಆರ್ ಪಿ ಸಿಆರ್‌ಪಿ ನಿರ್ಣಾಯಕರು ಶಿಕ್ಷಕರು ಮಕ್ಕಳು ಭಾಗವಹಿಸಿದ್ದರು*
10) * ದಿನಾಂಕ 16.9.2022 ವಾಲಿಬಾಲ್ ಪಂದ್ಯಾವಳಿಯಲ್ಲಿ ತಾಲೂಕು ಮಟ್ಟ ದಲ್ಲಿ ಜಯಶಾಲಿಯಾಗಿ ಜಿಲ್ಲಾ ಮಟ್ಟಕ್ಕೆ ಪ್ರವೇಶ ಪಡೆದ ಇಟಿಗಟ್ಟಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು; ಪ್ರಧಾನ ಗುರುಮಾತೆಯವರು ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಮತ್ತು ದೈಹಿಕ ಶಿಕ್ಷಕರಾದ ಶ್ರೀ ವಿ ಜೀ ಸೆತಸನದಿ ಅವರಿಗೆ ಅಭಿನಂದಿಸಿದ್ದಾರೆ*
9) ಇಂದು 15.9.2022 ರಂದು ನವಲೂರ ಸಂಪನ್ಮೂಲ ಕೇಂದ್ರಕ್ಕೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಿರೀಶ್ ಪದಕಿ ಸರ್ ಮತ್ತು ಕಾರ್ಪೊರೇಟರ್ ಆದ ಶ್ರೀ ಮಯೂರ ಮೊರೆ ಯವರು ಉಪ ನಿರ್ದೇಶಕರ ಕಾರ್ಯಾಲಯದ DYPC ಯವರಾದ ಶ್ರೀ ಹುಡೇದಮನಿ ಸರ್ ಕ್ಷೇತ್ರ
ಸಮನ್ವಯಾಧಿಕಾರಿಗಳಾದ ಶ್ರೀ ಎಂ. ವಿ. ಅಡಿವೆರ್ ಸರ್ ಭೇಟಿ ನೀಡಿ crc ಕೇಂದ್ರವನ್ನು ಪರಿ ಶೀಲಿಸಿ ಮಾರ್ಗದರ್ಶನ ಮಾಡಿದರು ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಗೂ ಸರ್ಕಾರಿ ಪ್ರೌಢಶಾಲೆ ನವಲೂರಿನ ಮುಖ್ಯೋಪಾಧ್ಯಾಯರಾದ ಶ್ರೀ ವಿಜಯಕುಮಾರ್ ಸರ್, ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಡಿಗೇರ್ ಸರ್ ಹಾಗೂ ಎಂ ಪಿ ಎಸ್ ನವಲೂರ್ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಎಲ್ ಟಿ ದಾಸರ್ ಸರ್ ಹಾಗೂ sdmc ಅಧ್ಯಕ್ಷರು ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರು ಉಪಸಿತರಿದ್ದರು....ಹಾಗೂ 3 ಶಾಲೆಗಳಿಗೂ ಸಂದರ್ಶನ ನೀಡಿ ಮಾರ್ಗದರ್ಶನ ಮಾಡಿದರು.
8)HPS ಸತ್ತೂರ...ಶಾಲೆಯ...ಬಾಲಕ ..ಬಾಲಕಿಯರ..ತಂಡ . ದಿನಾಂಕ 14.9.2022 ರಂದು ನಡೆದ ತಾಲೂಕ ಮಟ್ಟದ.ಖೋಖೋ ಆಟದಲ್ಲಿ ...ಪ್ರಥಮ.ಸ್ಥಾನ.ಪಡೆದು.ಜಿಲ್ಲಾ ಮಟ್ಟಕ್ಕೆ.ಆಯ್ಕೆಯಾಗಿದ್ದಾರೆ ..ಅಭಿನಂದನೆಗಳು 💐💐💐
6)ದಿನಾಂಕ 12.9.2022 ರಂದು GLPS JOGELLAPR ಇಲ್ಲಿ ಮಕ್ಕಳಿಗೆ ಬೇಯಿಸಿದ ಮೊಟ್ಟೆ ವಿತರಿಸಲಾಯಿತು
5)ದಿನಾಂಕ 12.9.2022 ರಂದು GHPS NAVALUR CHAVANI ಇಲ್ಲಿ ನೂತನ SDMC ರಚನೆಯಾಯಿತು

4)ಕ್ರೀಡಾ ಕೂಟ ಹಾಗೂ ಪ್ರತಿಭಾ ಕಾರಂಜಿ ಕುರಿತು ನವಲೂರ ಕ್ಲಸ್ಟರ್ ಮಟ್ಟದ ಪ್ರಧಾನ ಗುರುಗಳ ಸಭೆಯನ್ನು HPS ನವಲೂರ ಛಾವಣಿ ಶಾಲೆಯಲ್ಲಿ ಆಯೋಜಿಸಲಾಗಿದೆ.

3)ನವಲೂರ ಕ್ಲಸ್ಟರ್ ಮಟ್ಟದ ಕ್ರೀಡಾ ಕೂಟ ದಿನಾಂಕ 19-8-2022 ರಂದು ನಡೆದವು.2)ನವಲೂರ ಕ್ಲಸ್ಟರ್ ಕೇಂದ್ರದ ಉದ್ಘಾಟನೆ
1)ಇಂದು 24-8-2022 ನವಲೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಗ್ಲೋಬಲ್ ಸ್ಕೂಲ್ ತಡಸಿನಕೊಪ್ಪದಲ್ಲಿ ವಿಧ್ಯುಕ್ತವಾಗಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
1)ಇಂದು 24-8-2022 ನವಲೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಗ್ಲೋಬಲ್ ಸ್ಕೂಲ್ ತಡಸಿನಕೊಪ್ಪದಲ್ಲಿ ವಿಧ್ಯುಕ್ತವಾಗಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.










































.jpeg)
.jpeg)
.jpeg)
.jpeg)



















